Love Mocktail 2 Movie Mp3 Songs
Love Mocktail 2 is a romantic entertainer movie directed by Darling Krishna. A sequel to Love Mocktail, it stars Darling Krishna playing the main lead role along with many others are seen in supporting roles. The music was composed by Raghu Dixit while cinematography and editing were done by Sri Crazymindzz. The film is produced by Milana Nagraj. Here you can get the full details about the Love Mocktail 2 Movie Mp3 Songs.
1. Ninadene Januma Song Lyrics in Kannada
Ninadene Januma lyrics from Love Mocktail 2 movie. Ninadene Januma is an emotional Kannada song featuring Love Mocktail Characters Aditya and Nidhi. Raghavendra Kamath has penned Ninadene Januma song lyrics and the music is composed by Magical Composer Nakul Abhyankar. This song was sung by Nakul Abhyankar. Ninadene Januma’s video song features Darling Krishna and Milana Nagaraj in lead roles.
ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ..
ನೀನಿರದೆ ನಾನಿರೆನು
ಒಹ್ ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು..
ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ
ಬೆಳಗುವುದು ಈ ಮನ..
ನೀ ಜೀವನ..
ಕನಸಾದೆ ನೀನು ನನಸಾದೆ ನೀನು
ಮನಸಾರೆ ನಾನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು
ನೀ ಹೋದೆ ಯಾವ ಕಡೆಗೆ
ಹೇಗಿರಲಿ ನಿನ್ನ ಹೊರತು
ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ
ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ
ಒಗಟಾಗಿದೆ.. ಈ ಜೀವನ..
ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ..
ನೀನಿರದೆ ನಾನಿರೆನು
ಒಹ್ ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು..
ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ
ಬೆಳಗುವುದು ಈ ಮನ..
ನೀ ಜೀವನ..
2. Ee Prema Song Lyrics in Kannada
Ee Prema Lyrics from Love Mocktail 2 movie. Ee Prema is a happy love Kannada Song released under the production of Darling Krishna and Milana Nagraj. Raghavendra Kamath has penned Ee Prema song lyrics and the music is composed by Nakul Abhyankar. This song was sung by Ramya Bhat. Ee Prema video song features Darling Krishna, Milana Nagaraj, and Rachel David in a lead role.
ಯಾಕೆ ಹೀಗೆ ಸುಳಿದೆ ನೀನು
ಯಾವ ಬಣ್ಣ ಬಳಿದೆ ನೀನು
ನಿನ್ನ ಸೇರೋ ಕನಸು ಕಂಡೆನು
ಸೋತೆನು ಹಾ ಸೋತೆನು
ಸೂರ್ಯ ಚಂದ್ರ ಇರುವ ವರೆಗೂ
ಹಗಲು ರಾತ್ರಿ ನೀನೆ ಬೆರಗು
ಕಂಡ ಕ್ಷಣದಲ್ಲೇ ಕರಗಿ
ನಾ ಸೋತೆನು ಹಾ ಸೋತೆನು
ಪ್ರೀತಿಯೇ ಏನು ನಿನ್ನ ಮಾಯೆ?
ಮನಸಿದು ನಿಂತಲ್ಲೇ ಹಾರಿದೆ
ಆಸೆಯು ದಿನ ರಂಗೇರಿದೆ
ಸವಿಗನಸೆ ಇಡಾಡಿದೆ
ಈ ಪ್ರೇಮ!
ನಿನ್ನ ಕೊಡುಗೆ ನನಗೆ
ಈ ಪ್ರೇಮ!
ನೀನಿರಲು ಬಳಿಗೆ
ಈ ಪ್ರೇಮ!
ಕಣ್ಣ ಸಲುಗೆ ಸಲುಗೆ
ಈ ಪ್ರೇಮ..
ಈ ಪ್ರೇಮ!
ನೀನೆ ವರವು ನನಗೆ
ಈ ಪ್ರೇಮ!
ನೀನಿರಲು ಜೊತೆಗೆ
ಈ ಪ್ರೇಮ!
ಭಾವ ಬೆಸದ ಬೆಸುಗೆ
ಈ ಪ್ರೇಮ..
ಏಕೋ ಏನೋ ಮನಸು ಈಗ
ಉಯ್ಯಾಲೆ ಅಂತಾಗಿದೆ..
ಬೀಸೋ ಗಾಳಿ ಕಿವಿಯನು ಸೋಕಿ
ಇಂಪಾದ ಹಾಡಾಗಿದೆ
ಹೊಸತು ಒಂದು ಭಾವ ಲೋಕ
ನನ್ನಲ್ಲಿ ತೆರದಂತಿದೆ
ತರಲೆ ತಾಜಾ ತಾಜಾ ಆಸೆಗಳು
ಬಿಟ್ಟು ಬಿಡದೆ ಮುಟ್ಟಿದೆ
ಸದ್ದಿಲ್ಲದೇ ಗೊತ್ತಿಲ್ಲದೇ
ಈ ಜ್ವರವು ಶುರುವಾಗಿದೆ
ಪ್ರೀತಿಯೇ ಏನು ನಿನ್ನ ಲೀಲೆ?
ನನಗಿದೋ ಈಗೆಲ್ಲ ಖುಶಿಯಾಗಿದೆ
ಆಸೆಯು ದಿನ ರಂಗೇರಿದೆ
ಸವಿಗನಸೆ ಇಡಾಡಿದೆ
ಈ ಪ್ರೇಮ!
ನಿನ್ನ ಕೊಡುಗೆ ನನಗೆ
ಈ ಪ್ರೇಮ!
ನೀನಿರಲು ಬಳಿಗೆ
ಈ ಪ್ರೇಮ!
ಕಣ್ಣ ಸಲುಗೆ ಸಲುಗೆ
ಈ ಪ್ರೇಮ..
ಈ ಪ್ರೇಮ!
ನೀನೆ ವರವು ನನಗೆ
ಈ ಪ್ರೇಮ!
ನೀನಿರಲು ಜೊತೆಗೆ
ಈ ಪ್ರೇಮ!
ಭಾವ ಬೆಸದ ಬೆಸುಗೆ
ಈ ಪ್ರೇಮ..
3. Ide Swarga Song Lyrics in Kannada
Ide Swarga Lyrics from Love Mocktail 2 Kannada movie. Ide Swarga song is a romantic song about the connection between the protagonist and infamous character Nidhima’ from Love Mocktail. Raghavendra Kamath has penned Ide Swarga Song lyrics and the music is composed by Nakul Abhyankar. This song was sung by Sanjith Hegde. Ide Swarga video song features Darling Krishna, Milana Nagaraj, and Rachel David in a lead role.
ಹೇಳಲೇನೊ ಆಗದೆ
ನನ್ನಲೇನೋ ಆಗಿದೆ
ಮಾತು ಮೌನ ಹಾಡಿದೆ
ಯಾವ ಮಾಯೆ ಮಾಡಿದೆ
ನೀನು ಕಂಡ ಕೂಡಲೆ
ಜೀವ ಬಂದ ಹಾಗಿದೆ
ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ
ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ ನಿನ್ನಲ್ಲಿದೆ ಸಂತೋಷವು
ಉಲ್ಲಾಸವು ಉತ್ಸಾಹವು
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
ನೀ ಇರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ
ನೀ ಇರುವಾಗ ಆ ಶುಭಯೋಗ
ನನ್ನನ್ನೇ ನಾನು ಮರೆತುಹೋದಂತೆ
ನೀನಿರುವಾಗ ನನಗೀಗ ಆನಂದ
ನಿನ್ನ ಕಂಡ ಕ್ಷಣವೇ ನನ್ನಲೀಗ
ಮತ್ತೆ ಮರಳಿ ಜೀವ ಬಂದಂತೆ
ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ ನಿನ್ನಲ್ಲಿದೆ ಸಂತೋಷವು
ಉಲ್ಲಾಸವು ಉತ್ಸಾಹವು
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
4. Sanchariyagu Nee Song Lyrics in Kannada
Sanchariyagu Nee Lyrics from Love Mocktail 2 Kannada movie. Sanchariyagu Nee’s song is an emotional song on how the lead is unable to forget the infamous character Nidhima from Love Mocktail. Raghavendra Kamath has penned Sanchariyagu Nee Song lyrics and the music is composed by Nakul Abhyankar. This song was sung by Vijay Prakash and Rakshita Suresh. Sanchariyagu Nee’s video song features Darling Krishna, Milana Nagaraj, and Rachel David in a lead role.
ದೂರ ಹೋದರು ನನ್ ಒಲವೆ
ನೂರು ಜನ್ಮಕು ಕಾಯುವೆ
ನನ್ನ ಪುಟ್ಟದಿ ಹೃದಯದಲಿ
ಬೇಡ ಎಂದರು ನೀ ಇರುವೆ
ಗೆಳೆಯ ಈ ಹುಚ್ಚು ಮನಸಲಿ ಸುರಿದ
ಒಲವು ನಿನ್ನದೇ..
ನಿನ್ನ ಜೊತೆಗೆ ನಾನಿರಲೆಂದು
ಹಣೆಯಲಿ ಬರೆಯದೆ..
ವಿಧಿ ಏಕೆ ನೀನು ಬದುಕಿಗೆ ತಿರುವಾದೆ?
ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಟವೋ
ಸಂಚಾರಿಯಗು ನೀ..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
ಹೇಗೆ ನಾ ಬಾಳಲಿ?
ನಿನ್ನ ನೋಡದೆ ನಾ ಇರಲಾರೆ
ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ
ಉಸಿರೇ..
ಮರೆಯಾದರೆ ಮರೆತಿರಲಾರೆ
ನೆನಪಾದರೆ ನಗುತಿರಲಾರೆ
ಮುನಿಸೇತಕೆ? ನನ್ನನು ಬಣ್ಣಿಸಿ ಬಾರೆ
ತನು ಮನವೆಲ್ಲ ನೀನಿರುವೆ
ನೀನಿರದೆ ನಾ ಹೇಗಿರಲಿ
ನಿನ್ನ ಸುಲಿವಾಗದೆ ಮನ ಮರೆತಾಗಿದೆ
ತಡ ಮಾಡದೆ ನೀ ಬಂದುಬಿಡು
ನಿನಗಾಗಿಯೇ.. ಹುಡುಕಾಡುವೆ..
ಒಹ್ ಪ್ರಾಣವೇ.. ಒಹ್ ಪ್ರಾಣವೇ..
ಯಾರಲ್ಲಿಯೂ ನಾನು ನಿನ್ನನು ಕಾಣದೆ
ನಿನ್ನದೇ ಸನಿಹ ಎಂದು
ನನ್ನ ಜೊತೆಗಿರೆ..
ಯಾರಲ್ಲಿಯೂ ನಾನು ಏನನು ಹೇಳಲೇ
ನೀನಿರೆ ಸಾಂತ್ವನ
ನನ್ನ ಮನಸಿಗೆ..
ಹೃದಯ ಪೂರ್ಣ ಆವರಿಸಿರುವ
ಒಲವು ನಿನ್ನದೇ..
ನೀನೆ ನನ್ನ ಜೊತೆಗಿರಬೇಕು
ಎಂದು ಬಯಸಿದೆ
ನಿಧಿಮ ಹೇಳು.. ನೀನು..
ಇರೋ ಕಡೆ ನಾ ಬರುವೆ
ಭಯವಾಗಿದೆ.. ನೀನಿಲ್ಲದೆ..
ಗುರಿ ಇಲ್ಲದೆ.. ಹುಡುಕಾಡುವೆ..
ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಟವೋ
ಸಂಚಾರಿಯಗು ನೀ..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
ಹೇಗೆ ನಾ ಬಾಳಲಿ?
5. O Nidhima Song Lyrics in Kannada
O Nidhima Lyrics from Love Mocktail 2 is the latest Kannada song sung by Nakul Abhyankar and Rakshita Suresh with music also given by Nakul Abhyankar. O Nidhima song lyrics are written by Raghavendra Kamath.
ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂತು
ಬದಲ್ಲಾದೆ ನಾನಿಂದು
ನೀನೇ ನೀನೇ
ಆ ನಗು ತುಂಬಿದೆ ನನ್ನಲ್ಲಿ
ನೀನೇ ನೀನೇ
ಗೆಲುವು ತುಂಬಿದೆ ಮತ್ತೆ ನೀ ಬಂತು
ಸಂತೋಷ ಇನ್ನೆಂದು
ನಿನ್ನಿಂದ ಕನಸು
ಮನಸು ಮತ್ತೇರಿ ಚಿತ್ತಗಿದೆ
ನಿನ್ನಿಂದ ಕನಸು
ಮನಸು ಹುಚ್ಚೇರಿ ಚಿತ್ತಾಗಿದೆ
ಓ ನಿಧಿಮಾ
ನನಗೇ ನೀನೀರೆ ಸ್ಪೂರ್ತಿ
ಓ ನಿಧಿಮಾ
ನನಗೇ ನೀನೀರೆ ಪ್ರೀತಿ
ಓ ನಿಧಿಮಾ
ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂತು
ಬದಲ್ಲಾದೆ ನಾನಿಂದು
ನಾನೂ ನನಗೇ ನೀನು
ಸಿಗಲೇಬೇಕು ಎನೆ ಆದರು
ಇದಂತು ಎರಡು ಹೃದಯದ ಸ್ಪಂದನ
ನಿನ್ನಾಗ ಪ್ರೀತಿಗೆ ಸೋತಂತು ಬಂದೇನ
ನಿನ್ನ ಜೊತೆಗೇ ನಾನೂ
ಇರಲೇಬೇಕು ಎನೆ ಆದರು
ಯಾರಿಗೂ ಕಾಣದ ಮಾಯದ ಸೇತುಬಂಧನ
ಹೊಸ ಹೊಸತನ ತರುತಿದೇ ನಮ್ಮಮಿಲನ
ಒಂಥರಾ ಸುಂದರ
ಭಾವವು ಮತ್ತೊಮ್ಮೆ ಮನೆ ಮಾಡಿದೆ
ಉತ್ತರ ಹತ್ತೀರ
ಇದ್ದಾಗ ಹೇಳೋಕೆ ಮನಸಾಗಿದೆ
ಓ ನಿಧಿಮಾ
ನನಗೇ ನೀನೀರೆ ಸ್ಪೂರ್ತಿ
ಓ ನಿಧಿಮಾ
ನನಗೇ ನೀನೀರೆ ಪ್ರೀತಿ
ಓ ನಿಧಿಮಾ
ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂತು
ಬದಲ್ಲಾದೆ ನಾನಿಂದು
Also Read:Bhoot Police MP3 Songs