Ninna Sanihake Movie Mp3 Songs – Listen and Download

0

Ninna Sanihake Movie

Ninna Sanihake Movie Mp3 Songs – Listen and Download

Ninna Sanihake is a romantic entertainer movie directed by Suman Jadugar and jointly produced by Akshay Rajsekhar and Ranganath Kudli. The movie cast includes Suraj Gowda and Dhanya Ramkumar are in the main lead roles while Raghu Dixit scored the music.

1. Maley Maley Song Lyrics in Kannada 

The soulful Maley Maley song is a soothing melody created and sung by Raghu Dixit from the Ninna Sanihake movie starring Suraj Gowda & Dhanya Ramkumar, in this movie Vasuki Vaibhav’s lyrics writing.

ಮಳೆ ಮಳೆ ಮಳೆಯೇ
ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ
ಪ್ರೀತಿಯ ಮಳೆ

ಹನಿ ಹನಿ ಮುಳಗಲಿ
ನವಿರಾಗುವ ತೀರಕೆ
ಮನದನಿ ಬಯಸಿದ
ಈಡೇರಿಸು ಕೋರಿಕೆ!

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಉಸಿರಲ್ಲಿ ಹರಡಿದೆ
ಸುಂದರ ಸಂಕಟ
ಹೆಸರನ್ನು ನೆನೆದರೆ
ಜೀವನ ಸಾರ್ಥಕ
ಕಂಗಳ ಹಿಂಬಾಲಿಸು

ಹೇಳುವ ಕನಸ
ನೀನಿರೆ ನನ್ನ ಜೀವಕೆ
ಇಲ್ಲಿದೆ ವಿರಸ
ನಿನ್ನಯ ಮುನಿಸಲ್ಲಿಯೆ ನನ್ನನೆ ನಮಿಸು
ನಿನ್ನಯ ಸಂಕೋಚಕೆ ನನ್ನನೆ ಸ್ಮರಿಸು..

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಕೊರಳನು ಬಿಗಿಯುವ
ನೋವಿದೆ ನನ್ನಲಿ
ಕೇವಲ ಮಾತಲ್ಲಿ ಹೇಗೆ ನಾ ತುಂಬಲಿ
ನನ್ನಯ ಈ ಕಂಬನಿ
ನಿನ್ನದೆ ಕೊಡುಗೆ

ಸೇರಲಿ ಉಸಿರೆಲ್ಲವೂ ಸಾವಿನ ಬಾಳಿಗೆ
ಕಾಡುವ ಕನಸೆಲ್ಲವು
ಬರಿ ಮೂಡ ನಂಬಿಕೆ
ಕಾಡುವ ನೆನಪೆಲ್ಲವು
ಏಕಾಂತದ ಕೋರಿಕೆ..

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ
ಪ್ರೀತಿಯ ಮಳೆ

ಹನಿ ಹನಿ ಮೊಳಗಲಿ
ನವಿರಾಗುವ ತೀರಕೆ
ಮನದನಿ ಬಯಸಿದ
ಈಡೇರಿಸು ಕೋರಿಕೆ!

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

2. Nee Parichaya Song Lyrics in Kannada

Nee Parichaya lyrics from Ninna Sanihake Kannada movie. Nee Parichaya is a Romantic Kannada song released under the banner of White and Grey Pictures. Vasuki Vaibhav has penned Nee Parichaya Song lyrics and the music is composed by Raghu Dixit. This song was sung by Siddhartha Belmannu and Rakshita Suresh. Nee Parichaya’s video song features Suraj Gowda and Dhanya Ramkumar in a lead roles.

ನೀ ಪರಿಚಯ ಹೇಳದೆ
ಸೆಳೆದೆ ಉಸಿರನು ಮೆಲ್ಲಗೆ..
ನಾ ಹೊರಟರು ಎಲ್ಲಿಗೆ
ತಲುಪೋ ತಾಣ ನಿನ್ನಲ್ಲಿದೆ..
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ..

ಈ ಬದುಕಿನ ಸೌಕ್ಯವು
ಅಡಗಿ ನಿನ್ನ ಕಣ್ಣಲ್ಲಿದೆ
ಈ ಮಧುರ ಸಾಗಂತ್ಯವು
ಮನದ ಹೆಜ್ಜೆ ಗುರುತಾಗಿದೆ
ಅರಳು ಪ್ರತಿ ಆರಂಭಕು
ಹೊಸೆವ ಕತೆ ನೂರಾಗಿದೆ

ನೀನಿಲ್ಲದೆ ಬೇರೆ ಗಮನಾನೆ ಇಲ್ಲ
ಒಲವಗಿದೆ ಬೇರೆ ಸಂದೇಹವಿಲ್ಲ
ಈ ಭಾವ ಲೋಕದ ಒಪ್ಪಂದವೆಲ್ಲ
ನಿಯಮಾನುಸಾರಕೆ ಸಂಭಂದಿಸಿಲ್ಲ
ನಾ ಬದುಕುವ ಆಸೆಗೆ
ಹುರುಪು ಈಗ ಬಂದಂತಿದೆ
ಈ ಕನಸಿನ ಆಕಾಶಕೆ
ಹೊಳಪು ನೀನೆ ತಂದಂತಿದೆ

ಇಷ್ಟೊಂದು ಮೌನ ಒಬ್ಬಂಟಿಯಾಗಿ
ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ
ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾಳಲ್ಲಿ
ಹೊಸದಾಗಿ ಸುಳಿದು ತಂಗಾಳಿ
ಬದಲಾಗಿದೇನೋ ಬ್ರಮೆ
ಒಂದಾಗಲು ಸಾಲದೇ

ನೀ ಪರಿಚಯ ಹೇಳದೆ
ಸೆಳೆದೆ ಉಸಿರನು ಮೆಲ್ಲಗೆ..
ನಾ ಹೊರಟರು ಎಲ್ಲಿಗೆ
ತಲುಪೋ ತಾಣ ನಿನ್ನಲ್ಲಿದೆ..
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ..

3.Olavaagidhe Song Lyrics in kannada

ಶುರುವಾದ ಮೇಲೆ ಮಾತೊಂದು
ಬದಲಾದಂತೆ
ಕಣ್ಣಲ್ಲೇ ನೀನು ನುಡಿವಾಗ
ಒಂದಾದ ಮೇಲೆ ಮತ್ತೊಂದು
ಕನಸಾದಂತೆ
ಜೊತೆಯಲ್ಲಿ ನೀನೆ ಇರುವಾಗ

ಹೊಸದಾಗಿ ಕಂಡು ಕೊಂಡೆ
ನಿನ್ನ ಕಂಡ ಗಳಿಗೆ
ಖುಷಿಯೆಲ್ಲ ಈ ಜೀವಕ್ಕೆ
ನೀನು ಕೊಟ್ಟ ಕೊಡುಗೆ
ಅತಿಯಾದರೆ ಚೆಂದ ತಾನೇ
ಪ್ರೀತಿಯಲ್ಲಿ ಸಲಿಗೆ
ಅನುರಾಗಿ ಆಗೋ ಆಸೆ
ಸಿಕ್ಕರೆ ನೀ ಬಳಿಗೆ

ಒಲವಾಗಿದೆ..
ಅನಿವಾರ್ಯವು ಏನಿದೆ ನೀನಲ್ಲದೆ?
ಒಲವಾಗಿದೆ..
ಅರಿವಾಗಿದೆ ಎಲ್ಲವು ನಿನ್ನಿಂದಲೇ

ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..

ಭೂಮಿ ಆಕಾಶ ಇರುವಂತೆ ಜೊತೆ ಬಿಡದಂತೆ
ನಿನ್ನಲ್ಲೇ ನಾನು ಬೆರೆತಂತೆ
ನನಗೂನು ಈಗ ನಿನ್ನಂತೆ ನೆನಪಿರದಂತೆ
ಜಗವೆಲ್ಲ ಪೂರ ಮರೆತಂತೆ
ಇರದೇನೆ ನನಗಿನ್ನೆಲ್ಲಿ ಕಾದುವಂತ ಕನಸು
ಹುಸಿಯಾಗಿ ಮುನಿದಾಗೆಲ್ಲ ನೀನೆ ನಗುವ ಮೂಡಿಸು
ಅತಿಯಾಗಿ ಎಲ್ಲ ಮರೆತು ನನ್ನೇ ವ್ಯಮೊಹಿಸು
ಜಗವೆಲ್ಲ ಮೀರಿ ಹಾರೋ ಮಾಯೆಯನ್ನೇ ಕಳಿಸು

ಒಲವಾಗಿದೆ..
ಸಿಹಿಯಾಗಿದೆ ಲೋಕವೇ ನಿನ್ನ ತೋಳಲಿ
ಒಲವಾಗಿದೆ..
ಸುಖ ಒಂದಿದೆ ನೀನಿರೆ ನನ್ನ ಸೋಲಲಿ

ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..

ಹೆಸರಿಲ್ಲದ ಸಂಬಂಧ ಬಿಡುವಿಲ್ಲದ ಅನುಬಂಧ
ಬಾಳೊಂದು ದಿನವು ಅರಳೋ ಬಗೆಯ ಚೆಂದ ಚೆಂದ
ಒಂದೊಂದು ಕ್ಷಣ ಕೂಡ ಆಕರ್ಷಕವಾದಂತೆ
ಹೊಸದಾಗಿದೆ ಲೋಕವೇ ನಿನ್ನ ಛಾಯೆ ಇನ್ನು ಚಂದ
ಅಪರೂಪವಾದೆ ನೀಡಿ ಬಾಳಿಗೀಗ ನೆರಳು
ಬೆಲೆ ಎಲ್ಲಿದೆ ಯಾವುದಕಾದರು ಸೋಲದೇನೆ ಮೊದಲು?

ಒಲವಾಗಿದೆ..
ಅನಿವಾರ್ಯವು ಏನಿದೆ ನೀನಲ್ಲದೆ?
ಒಲವಾಗಿದೆ..
ಅರಿವಾಗಿದೆ ಎಲ್ಲವು ನಿನ್ನಿಂದಲೇ

ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..

4.Ninna sanihake title Song Lyrics in Kannada

Ninna Sanihake is a romantic entertainer movie directed by Suman Jadugar and jointly produced by Akshay Rajsekhar and Ranganath Kudli. The movie cast includes Suraj Gowda and Dhanya Ramkumar are in the main lead roles while Raghu Dixit scored music.

ಹೃದಯದ ಪರಿಪಾಡು ಹೀಗೇಕೆ ಅನಿಸೋದು
ಅರಿಯದೆ ಮನಸ್ಸೋತರೆ
ಸಮಯದ ಗತಿ ಮೆಲ್ಲ ಹೀಗೇಕೆ ಸಾಗೋದು
ನೆನೆಯುತ ನಿನ್ನ ಕಾದರೆ

ಬಿಡದೇ ಹಿಡಿದಂಥ
ಒಲವ ಮಳೆಗೆ
ಮನದ ನೆಲವೆಲ್ಲ
ಹಸಿರಾಗಿ ಹೂವಾಗಿದೆ
ನಿನ್ನ ಕೊಡುಗೆ

ನಿನ್ನ ಸನಿಹಕೆ ಬರುವೆ
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ
ನನ್ನ ಈ ಜೀವ ಕಿರುಕಾಣಿಕೆ

ನನ್ನ ಬದುಕೆಲ್ಲವ
ಸರಿದೂಗುವ ಹೊಣೆಗಾರಿಕೆ
ನಿನ್ನಲ್ಲಿದೆ

ಕಿವಿಗೊಡು ನೀ… ವಿವರಿಸುವೆ
ಬಿಸಿ ಉಸಿರ ಕವಿತೆಗಳ
ಕೂಡಿಡುವೆ ಬಿಡಬಿಡದೆ
ನೀನಿರುವ ನಿಮಿಷಗಳ
ಉಪಗ್ರಹವೇ ನಿನಗೆ ನಾನು

ಕನಸುಗಳ ತೆರೆದಿಡುವೆ
ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೇ
ಹೃದಯದಲಿ ಮಿನುಮಿನುಗು
ಕೊನೆವರೆಗೂ ಇದೇ ಥರ

ನಿನ್ನ ಸನಿಹಕೆ ಒಲವೇ
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ
ನನ್ನ ಈ ಜೀವ ಕಿರುಕಾಣಿಕೆ

ನನ್ನ ಬದುಕೆಲ್ಲವ
ಸರಿದೂಗುವ ಹೊಣೆಗಾರಿಕೆ
ನಿನ್ನಲ್ಲಿದೆ

5.Yeko Yeno Song Lyrics in Kannada 

Ninna Sanihake is a romantic entertainer movie directed by Suman Jadugar and jointly produced by Akshay Rajsekhar and Ranganath Kudli. The movie cast includes Suraj Gowda and Dhanya Ramkumar are in the main lead roles while Raghu Dixit scored music.

ಏಕೋ ಏನೋ ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ
ಏಕೋ ಏನೋ ನನಗೇನೋ ಆಗಿದೆ
ನಿನ್ನಾ ಚಹರೆ ಬಿಡದೇನೇ ಕಾಡಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ

ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ…
ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ..
ಓ ಸಖಿಯೇ ಸಖಿಯೇ ಏನಿದರ ಸೂಚನೆ..
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ…
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ

ಪ್ರೀತಿಯ ಕಂತೆ ಮಾರುವೇ
ನಾ ಕೊಲ್ಲುವೆಯ ಗೆಳೆಯ
ಕಾಯುತ ಕೂತೆ ಸಂತೆಯಲ್ಲಿ ನಿನ್ನನೇ..
ಏತಕೆ ಚಿಂತೆ…
ಮಾಡುವೆ ಮುಂಗಡ ಪಾವತಿ ನಾ ಗೆಳತಿ
ಸಲೀಸಾಗಿ ಪಡೆವೆ ಹೆಚ್ಚಾದರೂ ಧಾರಣೆ
ನಿನ್ನಾ ನಗುವ ಅರೆವಳಿಕೆ…
ನನಗಾಯ್ತು ಮತಿಭ್ರಮಣೆ
ಪ್ರತಿ ಕ್ಷಣದ ಕನವರಿಕೆ ಸೇರಿ ಆಚರಣೆ….

ಏಕೋ ಏನೋ ನನಗೇನೋ ಆಗಿದೆ
ಎರಡು ಕಣ್ಣು ನಿನ್ನನೇ ಹುಡುಕಿದೆ
ನೀನಿರದ ಅರೆ ಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೇ ಬೆಳಕಂತೆ…

ಓ ಸಖಿಯೇ ಸಖಿಯೇ ಹೊಸತೇನೋ ಭಾವನೆ..
ಓ ಸಖಿಯೇ ಸಖಿಯೇ ಏನಿದರ ಸೂಚನೆ..
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ…
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ

6. Bere Irode Olava Iraade Song Lyrics in Kannada

Bere Irode Olava Iraade Lyrics from Ninna Sanihake Kannada movie. Bere Irode Olava Iraade is an Emotional Kannada song released under the banner of White and Grey Pictures. Vasuki Vaibhav has penned Bere Irode Olava Iraade Song lyrics and the music is composed by Raghu Dixit. This song was sung by Ramya Bhat Abhyankar. Bere Irode Olava Iraade’s video song features Suraj Gowda and Dhanya Ramkumar in a lead role.

ಬೇರೆ ಇರೋದೇ ಒಲವ ಇರಾದೆ
ಉಸಿರೆಲ್ಲ ಬಿಸಿ ಆರಿದೆ
ಬದಲಾದ ಹಾದಿ
ಮನಸೇ ವಿರೋಧಿ
ಕನಸೆಲ್ಲ ಹುಸಿ ಆಗಿದೆ

ತೋಚಿದಷ್ಟು ಬದುಕುವೆ ನಾನು
ನಿನ್ನ ಹೊರತು ಇರಲಾರೆನು
ಎದೆಗುಳಿದಂತ ಮಾತಿದೆ
ಪುನರಾರಂಭಿಸಲು..
ನಡೆವಷ್ಟೀಗ ದಾರಿಯು
ಬಿಡದೆ ಬರಿ ಕಾವಲು..

ನಿನ ಸನಿಹಕ್ಕೆ.. ಬರಲು
ನನಗಿನ್ನೆಲ್ಲಿ ಇದೆ ಕಾರಣ

ನಿನ ಸನಿಹಕ್ಕೆ.. ಸುಳಿವ
ಪ್ರತಿ ಉಸಿರಾಟ ಬಲು ದಾರುಣ

ಮಿನುಗೋ ತಾರೆಯು ಆಕಾಶದಿ
ಕುಸಿದಂತಿದೆ.. ತನ್ನಂತೆ

7.The Sound of Chaos Song Lyrics in Kannada

Ninna Sanihake is a romantic entertainer movie directed by Suman Jadugar and jointly produced by Akshay Rajsekhar and Ranganath Kudli. The movie cast includes Suraj Gowda and Dhanya Ramkumar are in the main lead roles while Raghu Dixit scored the music.

ಯಾರೂ ಯಾರೂ
ನಾನ್ ಯಾರು
ಈ ನಶೆಯು
ಹೇಳಿದೇ ಪತ್ತೆಯಾ

ಬದುಕೆ ನಿನಗೊಂದು ವಿದಾಯ
ಬಡಿಯೋ ಈ ಮನಸ್ಸು ಮೃಘೀಯ
ಪ್ರೀತಿ ಗೀತಿ ವ್ಯರ್ಥ ಪೂರ
ಲೋಕವೆಲ್ಲ ಕ್ರೂರ!!

ಹೇ!! ಉರಿವ ಗಾಯ ಹೀರಿದಂತ
ರಕುತ ಲೆಕ್ಕವಿಲ್ಲ
ಹೊತ್ತಿ ಉರಿವ ಚಿತೆಯು
ಎಂದು ಬೆಳಗೊ ದೀಪವಲ್ಲ
ಹರಿತವಾದ ಕತ್ತಿ ಮಾಡದೆಂದು ಒಳ್ಳೆದನ್ನ
ಹೆಪ್ಪುಗಟ್ಟಿದಂತ ನೆನಪು ಕೂಡ ಕಪ್ಪು ಬಣ್ಣ

ಯಾಕೆ ಯಾಕೆ
ಮೋಹಕ್ಕೆ ಮನ ಸೋಲೋದು
ಜೋಕೇ ಜೋಕೇ
ಪ್ರೀತೀನೆ ನಂಜಾಗೋದು
ಏಯ್!! ನಂಬೋದು ಬೇಡ
ಸಾಯೋದು ಬೇಡ
ಮುಳ್ಳಾಗೋ ಪ್ರೀತಿಯಂತು ಬೇಡ
ಬೇಡ ಏನು ಬೇಡ

ಕತ್ತಲೆ ಸತ್ಯವು ಇನ್ನೆಂದಿಗೂನು
ಬೆಳಕಿದು ಮೋಸಗಾರ
ನಶೆ ಇದು ಶಾಶ್ವತ
ಹೀಗಾದರೂನೂ ಬದುಕನು
ಸರಿಸು ದೂರ

ಕತ್ತಲೆ ಸತ್ಯವು ಇನ್ನೆಂದಿಗೂನು
ಬೆಳಕಿದು ಮೋಸಗಾರ
ನಶೆ ಇದು ಶಾಶ್ವತ
ಹೀಗಾದರೂನೂ ಬದುಕನು
ಸರಿಸು ದೂರ

ಏ!! ಇಂದಿಗೂ ಇಲ್ಲ ನಾಳೆಗೂ
ಮುಚ್ಚಿ ಹೋಗುವಂತ ಹಾಳು ಬಾಳು ನಮ್ಮದು
ಕೆಟ್ಟದು ಒಳ್ಳೆದು
ಅಂತೇನು ಇಲ್ಲ ಎಲ್ಲ ಸುಳ್ಳು
ನಾವೆ ಮಾಡಿಕೊಂಡಿರೋದು

Also Read: Hero Full Movie Download, Songs, Lyrics

Leave a Reply

Your email address will not be published. Required fields are marked *